Surprise Me!

ಬಿಗ್ ಬಾಸ್ ಕನ್ನಡ ಸೀಸನ್ 5 : ಅನುಪಮಾ ಗೌಡ ಮೇಲೆ ಕೋಪಗೊಂಡ ರಿಯಾಜ್ ಭಾಷಾ | Filmibeat Kannada

2017-10-25 1 Dailymotion

'ಅಕ್ಕ' ಅನುಪಮಾ ಮೇಲೆ ರಿಯಾಝ್ ಗೆ ಕೆಂಡದಷ್ಟು ಕೋಪ.! ಯಾರ ಬಳಿಯೂ ವಾದ-ವಾಗ್ವಾದಕ್ಕೆ ಇಳಿಯದೆ, ತಾನಾಯ್ತು, ತಮ್ಮ ಕೆಲಸ ಆಯ್ತು ಅಂತ ಇರುವ 'ಬಿಗ್ ಬಾಸ್ ಕನ್ನಡ-5' ಸ್ಪರ್ಧಿ ರಿಯಾಝ್ ಗೆ ಸದ್ಯ ಕೆಂಡದಷ್ಟು ಕೋಪ ಬಂದಿದೆ. ಅದು ಅನುಪಮಾ ಗೌಡ ಮೇಲೆ.! ಮನೆಯ ಎಲ್ಲ ಸದಸ್ಯರಿಗೂ ಕ್ಯಾಪ್ಟನ್ ಆಗುವ ಅವಕಾಶ ಸಿಗಲಿ ಎಂಬ ಉದ್ದೇಶದಿಂದ 'ಬಿಗ್ ಬಾಸ್' ನೀಡಿದ್ದ ಟಾಸ್ಕ್ ನಲ್ಲಿ ತಮ್ಮ ಏಕಾಗ್ರತೆಯನ್ನ ಅನುಪಮಾ ಹಾಳು ಮಾಡಿದ್ದಕ್ಕೆ ರಿಯಾಝ್ ಮುನಿಸಿಕೊಂಡಿದ್ದಾರೆ. ಸಾಲದಕ್ಕೆ, ರಿಯಾಝ್ ಈ ವಾರ 'ಬಿಗ್ ಬಾಸ್' ಮನೆಯಿಂದ ಹೊರ ಹೋಗಲು ನಾಮಿನೇಟ್ ಕೂಡ ಆಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಆಗುವ ಅವಕಾಶವನ್ನು ಕೆಡಿಸಿದ ಅನುಪಮಾ ವಿರುದ್ಧ ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ ರಿಯಾಝ್. ಒಂದ್ಕಡೆ, ಟಾಸ್ಕ್ ನಲ್ಲಿ ಮಿಸ್ ಆದ ಚಾನ್ಸ್... ಇನ್ನೊಂದ್ಕಡೆ ಡೇಂಜರ್ ಝೋನ್... ಈ ಎರಡರಿಂದ ಅನುಪಮಾ ಮೇಲೆ ರಿಯಾಝ್ ಸಿಕ್ಕಾಪಟ್ಟೆ ಕೋಪಿಸಿಕೊಂಡಿದ್ದಾರೆ. ಮುಂದೇನಾಗುತ್ತೋ, ನೋಡೋಣ. <br />

Buy Now on CodeCanyon